ಗೌಪ್ಯತಾ ನಿಯಮ

ನಿಮ್ಮ ಪಾಲಿಸಿ ನಮಗೆ ಮುಖ್ಯವಾಗಿದೆ. ನಿಮ್ಮ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ನಾವು ಹೆಚ್ಚಿನ ಗುಣಮಟ್ಟದ ಗ್ರಾಹಕ ಗೌಪ್ಯತಾ ನಿಯಮವನ್ನು ಅನುಸರಿಸುತ್ತೇವೆ ಮತ್ತು ಭದ್ರತಾ ವಹಿವಾಟಿನ ಭರವಸೆ ನೀಡುತ್ತೇವೆ.

ನಾವು ಈ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ಮತ್ತು ಪ್ರತ್ಯೇಕ ಅಭ್ಯಾಸ ಮಾಡುವುದಾಗಿ ವಿವರಿಸುತ್ತಿದ್ದೇವೆ.

ನಮ್ಮ ವೆಬ್ ಸೈಟ್ ಬಳಸುವ ಮೂಲಕ ನೀವು ನಮ್ಮ ಗೌಪ್ಯತಾ ನಿಯಮಗಳ ನಿಬಂಧನೆ ಮತ್ತು ಷರತ್ತುಗಳಿಗೆ ಬದ್ಧರಾಗಿರಲು ಒಪ್ಪಿಗೆ ನೀಡಿರುತ್ತೀರಿ. ನೀವು ಒಪ್ಪದಿದ್ದಲ್ಲಿ ದಯವಿಟ್ಟು ನಮ್ಮ ವೆಬ್ ಸೈಟ್ ಪ್ರವೇಶಿಸಬೇಡಿ ಅಥವಾ ಬಳಸಬೇಡಿ. ಈ ನಿಯಮ ಯಾವುದೇ ಪೂರ್ವ ಸೂಚನೆಯಿಲ್ಲದೇ ಯಾವುದೇ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿದೆ. ಆದ್ದರಿಂದ ನಾವು ನಿಮಗೆ ಆಗಾಗ್ಗೆ ಗೌಪ್ಯತಾ ನಿಯಮದ ಮೂಲಕ ಕಾಲಕಾಲಕ್ಕೆ ಬದಲಾವಣೆಗಳನ್ನು ಅಳವಡಿಸಲಾದ ಅಪ್ ಡೇಟ್ ಗಳನ್ನು ವೀಕ್ಷಿಸುವಂತೆ ಮನವಿ ಮಾಡುತ್ತೇವೆ. ಈ ಗೌಪ್ತತಾ ನಿಯಮದಲ್ಲಿ ಬಳಸಿರುವಂತೆ, "ನಾವು", ಅಥವಾ "ನಮ್ಮ", ಅಥವಾ "ನಮಗೆ" ಮತ್ತು "ಕಂಪನಿ" ಎನ್ನುವ ಪದಗಳು ಮೆಡಿ ಅಸಿಸ್ಟ್ ಇನ್ಶುರೆನ್ಸ್ TPA ಪ್ರೈವೇಟ್ ಲಿಮಿಟೆಡ್ ಮತ್ತು ಅದರ ವರ್ತಮಾನ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಪದಗಳನ್ನು ಸೂಚಿಸುತ್ತದೆ.

ಮಾಹಿತಿ ಸಂಗ್ರಹ ಮತ್ತು ಬಳಕೆ:

ನೀವು ನಮ್ಮ ವೆಬ್ ಸೈಟ್ ಬಳಸುವಾಗ ಕಡ್ಡಾಯ ಹಾಗೂ ಕಡ್ಡಾಯವಲ್ಲ ಎಂದು ವರ್ಗೀಕರಿಸಲಾದ ನಿಮ್ಮ ಕುರಿತಾದ ಕೆಲವು ವೈಯಕ್ತಿಕ ಮತ್ತು ವೈಯಕ್ತಿಕವಲ್ಲದ ಮಾಹಿತಿಯನ್ನು ಸಂಗ್ರಹಿಸುತ್ತೇವೆ.

ವೈಯಕ್ತಿಕ ಮಾಹಿತಿ ನಿಮ್ಮ ಹೆಸರು, ಜನ್ಮದಿನಾಂಕ, ಲಿಂಗ, ನಿಮ್ಮ ದೂರವಾಣಿ ಮತ್ತು ಮೊಬೈಲ್ ಸಂಖ್ಯೆಗಳಂತಹ ಸಂಪರ್ಕ ಮಾಹಿತಿ, ಮನೆಯ ವಿಳಾಸ, ಇ-ಮೇಲ್ ಐಡಿ ಇತ್ಯಾದಿಗಳನ್ನು ಒಳಗೊಂಡಿದ್ದು ಇದು ಅವುಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ನಮ್ಮ ಕೆಲವು ಸೇವೆಗಳನ್ನು ಬಳಸುವಾಗ ನೀವು ಬಳಕೆದಾರರ ಐಡಿ ರಚಿಸಲು ಅಥವಾ ನಮ್ಮ ವೆಬ್ ಸೈಟ್ ಗೆ ನೋಂದಾಯಿಸಲು ಅಥವಾ ನಮ್ಮಲ್ಲಿ ಆರ್ಡರ್ ಮಾಡುವಾಗ ಹಣಕಾಸಿನ ಮಾಹಿತಿ ನೀಡಲು, ನಮ್ಮ ಗ್ರಾಹಕ ಕೇಂದ್ರದಿಂದ ಕರೆ, ಇಮೇಲ್ ಅಥವಾ ಇತರ ಕಾರಣಗಳಿಗಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮಗೆ ನೀಡುವ ಅಗತ್ಯವಿದೆ. ನೀವು ನಿಮ್ಮ ಮಾಹಿತಿಯನ್ನು ನೀಡದೇ ನಮ್ಮ ವೆಬ್ ಸೈಟ್ ಪ್ರವೇಶಿಸುವುದನ್ನು ಸಹ ಆಯ್ಕೆಮಾಡಬಹುದಾಗಿದೆ, ಆದರೆ ಇಂತಹ ಸಂದರ್ಭದಲ್ಲಿ ನೀವು ವೆಬ್ ಸೈಟ್ ನಲ್ಲಿರುವ ಕೆಲವೇ ವಿಭಾಗಳಿಗೆ ಮಾತ್ರ ಭೇಟಿ ನೀಡಬಹುದಾಗಿದ್ದು ಇದರಿಂದ ನಮ್ಮ ಕೆಲವು ಸೇವೆಗಳು ನಿಮಗೆ ತಪ್ಪಿಹೋಗಬಹುದು.

ಜೊತೆಗೆ ನೀವು ನಿಮ್ಮ ವೈದ್ಯಕೀಯ ದಾಖಲೆಗಳಂತಹ ನಿಮ್ಮ ಶಿಫಾರಸು, ಪರೀಕ್ಷಾ ವರದಿಗಳು, ಹಿಂದಿನ ವೈದ್ಯಕೀಯ ಇತಿಹಾಸ ಇತ್ಯಾದಿಗಳನ್ನು ಒಳಗೊಂಡ ಆದರೆ ಮೀರದ ನಿರ್ದಿಷ್ಟ ವೈಯಕ್ತಿಕ ಸೂಕ್ಷ್ಮ ಮಾಹಿತಿಯನ್ನು ನಮಗೆ ನೀಡುವ ಅಗತ್ಯವಿದೆ, ಈ ಮಾಹಿತಿ ನಿಮಗೆ ಎಷ್ಟು ಖಾಸಗಿಯಾದುದು ಎಂದು ನಮಗೆ ತಿಳಿದಿದ್ದು ಈ ಮಾಹಿತಿಯನ್ನು ನಮ್ಮಿಂದ ಪರಸ್ಪರ ಒಪ್ಪಿಗೆಯಾದಂತೆ ಆರೋಗ್ಯಕೇಂದ್ರದ ಸೇವಗಳಿಗೆ ಅಗತ್ಯವಾಗಿ ನೀಡಲು ಮಾತ್ರ ಬಳಸುವ ಭರವಸೆ ನೀಡುತ್ತೇವೆ. ಜೊತೆಗೆ ನೀವು ನಮ್ಮ ಬಳಿ ನಿಮ್ಮ ವೈದ್ಯಕೀಯ ವರದಿಗಳನ್ನು ಅಪ್ ಲೋಡ್ ಮಾಡುವ ಸೌಲಭ್ಯವನ್ನು ನೀಡುತ್ತಿದ್ದು ಇದನ್ನು ನೀವು ನಿಮಗಾಗಿ ನೀಡಲಾಗಿರುವ ವಿಶಿಷ್ಟ ಬಳಕೆದಾರರ ಐಡಿ ಬಳಸಿ ಪ್ರವೇಶಿಸಬಹುದಾಗಿದೆ. ಇದು ನಿಮಗೆ ಪ್ರಪಂಚದ ಯಾವುದೇ ಭಾಗದಿಂದಾದರೂ ಕೇವಲ ಕ್ಲಿಕ್ ಮೂಲಕ ನಿಮ್ಮೆಲ್ಲಾ ವೈದ್ಯಕೀಯ ವರದಿಗಳನ್ನು ಪ್ರವೇಶಿಸಲು ನೆರವಾಗುತ್ತದೆ. ನಾವು ನಿಮಗೆ ಮತ್ತೊಮ್ಮೆ ಈ ವರದಿಗಳನ್ನು ಯಾರೂ ವೀಕ್ಷಿಸುವುದಿಲ್ಲ ಮತ್ತು ಇದನ್ನು ಹ್ಯಾಕ್ ಮಾಡುವುದನ್ನು ತಡೆಯಲು ಮತ್ತು ಎನ್ ರೂಟ್ ಟ್ರಾನ್ಸ್ ಮಿಷನ್ ನಲ್ಲಿ ಡೀಕೋಡ್ ಮಾಡಲು ಎನ್ ಕ್ರಿಪ್ಟ್ ರೂಪದಲ್ಲಿ ಸಂಗ್ರಹಿಸುತ್ತೇವೆ ಎಂದು ಭರವಸೆ ನೀಡುತ್ತೇವೆ.

ಜೊತೆಗೆ ನೀವು ನಮ್ಮೊಂದಿಗೆ ವಹಿವಾಟು ನಡೆಸಿದಾಗ, ನಾವು ಕೆಲವು ಹೆಚ್ಚುವರಿ ಮಾಹಿತಿಗಳಾದ ನಿಮ್ಮ ಬಿಲ್ಲಿಂಗ್ ವಿಳಾಸ, ಕ್ರೆಡಿಟ್/ಡೆಬಿಟ್ ಕಾರ್ಡ್ ಸಂಖ್ಯೆ ಮತ್ತು ಕ್ರೆಡಿಟ್/ಡೆಬಿಟ್ ಕಾರ್ಡ್ ಅಂತಿಮ ದಿನಾಂಕ ಮತ್ತು/ಅಥವಾ ಇತರ ಪಾವತಿ ಸಾಧನದ ವಿವರಗಳನ್ನು ಸಂಗ್ರಹಿಸುತ್ತೇವೆ.

ನಾವು ಸಂಗ್ರಹಿಸಿದ ಮಾಹಿತಿ ನಿಜಕ್ಕೂ ಅಗತ್ಯವಿದ್ದು ಅದು ನಿಮ್ಮ ಅನುಭವವನ್ನು ಸಮಸ್ಯಾರಹಿತ, ಆರಾಮದಾಯಕ, ನಯವಾಗಿಸಲು ಮತ್ತು ಹೆಚ್ಚಾಗಿ ಸುರಕ್ಷಿತವನ್ನಾಗಿಸಲು ನಮಗೆ ಅಗತ್ಯವಾಗಿದೆ. ಇದು ನಮಗೆ ವ್ಯವಸ್ಥಿತ ಸೇವೆಗಳು, ನಿಮಗೆ ನಿಮ್ಮೆಲ್ಲಾ ಸಂದೇಹಗಳಿಗೆ ನೆರವಾಗಲು ಮತ್ತು ನಿಮಗೆ ಎದುರಾದ ಸಮಸ್ಯೆಗಳನ್ನು ಸರಿಪಡಿಸಲು, ದೀರ್ಘಾವಧಿ, ವಿಶ್ವಾಸಾರ್ಹ ಸಂಬಂಧ ಸ್ಥಾಪನೆಯ ಭರವಸೆಗಾಗಿ ನಿಮಗೆ ಅನುಸರಣೆ ನೀಡಲು, ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮನ್ನು ಯಾವುದೇ ವಿಧದ ವಂಚನೆ ಮತ್ತು ಕಾನೂನುಬಾಹಿರ ಬಳಕೆಗಳಿಂದ ರಕ್ಷಿಸಲು ನೆರವಾಗುತ್ತದೆ.

ನಾವು "ಕುಕೀಸ್"ಗಳಂತಹ ಮಾಹಿತಿ ಸಂಗ್ರಹ ಸಾಧನಗಳನ್ನು ವೆಬ್ ಸೈಟ್ ನ ಕೆಲವು ಪುಟಗಳಲ್ಲಿ ಬಳಸಿದ್ದು ಇದು ನಮ್ಮ ವೆಬ್ ಪುಟದ ಹರಿವನ್ನು ವಿಶ್ಲೇಷಿಸಲು ಮತ್ತು ವಿಶ್ವಾಸ ಹಾಗೂ ಸುರಕ್ಷತೆಯನ್ನು ಉತ್ತೇಜಿಸಲು ಅಗತ್ಯವಾಗಿದೆ. """ಕುಕೀ""ಗಳು ನಿಮ್ಮ ಹಾರ್ಡ್ ಡ್ರೈವ್ ನಲ್ಲಿರುವ ಸಣ್ಣ ಫೈಲ್ ಗಳಾಗಿದ್ದು ಇದು ನಿಮಗೆ ನಮ್ಮ ಸೇವೆಗಳನ್ನು ನಿಮಗೆ ನೀಡಲು ನೆರವಾಗುತ್ತದೆ." ನಾವು "ಕುಕೀ" ಬಳಕೆಯ ಮೂಲಕ ಮಾತ್ರ ಕೆಲವು ನಿರ್ದಿಷ್ಟ ವೈಶಿಷ್ಟ್ಯಗಳನ್ನು ಲಭ್ಯವಾಗುವಂತೆ ಮಾಡಿದ್ದೇವೆ.

ನಾವು ಕುಕೀಗಳನ್ನು ನಿಮ್ಮ ಪಾಸ್ ವರ್ಡ್ ಒಂದು ಅವಧಿಯಲ್ಲಿ ಕಡಿಮೆ ಬಾರಿ ನಮೂದಿಸಲು ಅನುಮತಿಸುವಂತೆಯೂ ಬಳಸಿದ್ದೇವೆ. ಹೆಚ್ಚಿನ ಕುಕೀಗಳು "ಸೆಷನ್ ಕುಕೀ"ಗಳಾಗಿವೆ, ಎಂದರೆ ಅವು ಅವಧಿಯ ಅಂತ್ಯದಲ್ಲಿ ನಿಮ್ಮ ಹಾರ್ಡ್ ಡ್ರೈವ್ ನಿಂದ ಸ್ವಯಂಚಾಲಿತವಾಗಿ ಅಳಿಸುತ್ತವೆ. ನೀವು ನಿಮ್ಮ ಬ್ರೌಸರ್ ಅನುಮತಿಸಿದಲ್ಲಿ ನಮ್ಮ ಕುಕೀಗಳನ್ನು ನಿರಾಕರಿಸಲು ಮುಕ್ತರಾಗಿದ್ದೀರೂ ನೀವು ನಮ್ಮೆಲ್ಲಾ ಸೇವೆಗಳಿಗೆ ಪ್ರವೇಶಿಸಲು ಅವು ನಿಮಗೆ ಅನುಮತಿಸುವುದರಿಂದ ಅವುಗಳಿಗೆ ಅನುಮತಿ ನೀಡಲು ನಾವು ನಿಮಗೆ ದೃಢವಾಗಿ ಸಲಹೆ ಮಾಡುತ್ತೇವೆ.

ಮಾಹಿತಿ ವಿನಿಮಯ:

ನಾವು ನಿಮ್ಮ ಗೌಪ್ಯತೆಯನ್ನು ಗೌರವಿಸುತ್ತೇವೆ ಮತ್ತು ಈ ಮೂಲಕ ನಿಮ್ಮ ಮಾಹಿತಿಯನ್ನು ಕೆಳಗಿನ ಸಂದರ್ಭಗಳನ್ನು ಹೊರತುಪಡಿಸಿ ಬಹಿರಂಗಪಡಿಸುವುದಿಲ್ಲವೆಂದು ಘೋಷಿಸುತ್ತಿದ್ದೇವೆ:

  • ಸಾರ್ವಜನಿಕ ಹಿತಾಸಕ್ತಿಯನ್ನು ಪ್ರಮುಖವಾಗಿ ಹೊಂದಿರುವ ಪರಿಶೀಲನೆಯೊಂದಿಗೆ ಸಂಪರ್ಕದಲ್ಲಿರುವ ಕಾನೂನಿನಿಂದ ಜಾರಿಯಾದ ಏಜೆನ್ಸಿಗಳಿಗೆ, ಕಾನೂನಿನ ಬಾಕಿ ಪ್ರಕ್ರಿಯೆಗಳಿಂದ ಅನುಮೋದಿಸಲ್ಪಟ್ಟ ನಂತರ
  • ನಮ್ಮ ಸಹಭಾಗಿಗಳು ಮತ್ತು ಸಹಸಂಸ್ಥೆಗಳಿಗೆ ವಂಚನೆಯನ್ನು ಪತ್ತೆಮಾಡಲು ಮತ್ತು ತಡೆಗಟ್ಟಲು, ಕಳ್ಳತನ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ಗುರುತಿಸಲು, ನಮ್ಮ ಸೇವೆಗಳ ನಿಂದನೆಯನ್ನು ತಡೆಯಲು ಸಂಬಂಧಿಸದ ಅಥವಾ ಬಹು ಖಾತೆಗಳೊಂದಿಗೆ ಸಂಯೋಜಿಸಲು; ಮತ್ತು ಜಂಟಿ ಅಥಆ ಸಹ-ಬ್ರಾಂಡಡ್ ಸೇವಗಳನ್ನು ಪ್ರೋತ್ಸಾಹಿಸಲು ನೀಡಲಾಗುತ್ತಿದ್ದು ಇಂತಹ ಸೇವೆಗಳನ್ನು ಒಂದಕ್ಕಿಂತ ಹೆಚ್ಚು ಕಾರ್ಪೊರೇಟ್ ಸಂಸ್ಗೆಗಳು ನೀಡುತ್ತಿವೆ.
  • ನಾವು ಕಂಪನಿ ಯಾವುದೇ ವಿಧದಲ್ಲಿ ಮರುನಿರ್ಮಾಣವಾಗಲು ನಿರ್ಧರಿಸಿದರೆ ಅಥವಾ ಇತರ ಯಾವುದೇ ಸಂಸ್ಥೆಯಿಂದ ಸ್ವಾಧೀನಗೊಂಡರೆ ನಮ್ಮ ಸಹಭಾಗಿಗಳು ಅಥವಾ ಸಹಸಂಸ್ಥೆಗಳೊಂದಿಗೆ ಇಂತಹ ಮಾಹಿತಿಯನ್ನು ವಿನಿಮಯ ಮಾಡುತ್ತೇವೆ ಮತ್ತು ಇಂಥ ಪರಿಸ್ಥಿತಿಯಲ್ಲಿ ಇತರ ಸಂಸ್ಥೆಗಳು ಈ ನಿಯಮವನ್ನು ಕಠಿಣವಾಗಿ ಅನುಸರಿಸುವುದನ್ನು ಮುಂದುವರೆಸುವುದನ್ನು ಖಚಿತಪಡಿಸಿಕೊಳ್ಳುವ ಭರವಸೆ ನೀಡುತ್ತೇವೆ.
  • ನೀವು ನಮ್ಮಿಂದ ಆನ್ ಲೈನ್ ಖರೀದಿ ಮಾಡುವಾಗ ಅಥವಾ ಆರೋಗ್ಯ ತಪಾಸಣೆಗಳಿಗಾಗಿ ಬುಕಿಂಗ್ ಮಾಡುವಾಗ ನಿಮ್ಮ ಹಣಕಾಸಿನ ಮಾಹಿತಿ ನೀಡುವ ಅಗತ್ಯವಿದೆ. ನಾವು ಮೂರನೆಯ ವ್ಯಕ್ತಿಯಿಂದ ಕಾರ್ಯನಿರ್ವಹಿಸಲ್ಪಡುವ ಆನ್ ಲೈನ್ ಪಾವತಿ ಮಾರ್ಗವನ್ನು ಬಳಸುತ್ತೇವೆ ಮತ್ತು ನೀವು ಅನುಮೋದಿತ ಪಾವತಿ ಮಾರ್ಗದಲ್ಲಿ ಭದ್ರತಾ ಸೈಟ್ ಗಳಿಂದ ವಹಿವಾಟು ನಡೆಸಲು ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳಂತಹ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ನೀಡಿರುವುದನ್ನು ಡಿಜಿಟಲ್ ಮೂಲಕ ಎನ್ ಕ್ರಿಪ್ಟ್ ಮಾಡುವುದರಿಂದ, ಪ್ರಸ್ತುತ ತಂತ್ರಜ್ಞಾನಕ್ಕೆ ಅನುಗುಣವಾಗಿ ಸಾಧ್ಯವಾದಷ್ಟೂ ಹೆಚ್ಚಿನ ಎಚ್ಚರಿಕೆ ತೆಗದುಕೊಳ್ಳಲಾಗುತ್ತದೆ.

ಮೂರನೆಯ ವ್ಯಕ್ತಿಯ ವೆಬ್ ಸೈಟ್ ಗಳಿಗೆ ಜಾಹೀರಾತು ಮತ್ತು ಸಂಪರ್ಕಗಳು:

ನಮ್ಮ ವೆಬ್ ಸೈಟ್ ಮೂರನೆಯ ವ್ಯಕ್ತಿಗಳ ವೆಬ್ ಸೈಟ್ ಗಳ ಕೆಲವು ನಿರ್ದಿಷ್ಟ ಜಾಹೀರಾತುಗಳು ಮತ್ತು ಸಂಪರ್ಕಗಳನ್ನು ಹೊಂದಿರಬಹುದು. ನೀವು ಈ ಜಾಹೀರಾತುದಾರರ ಮತ್ತು ಮೂರನೆಯ ವ್ಯಕ್ತಿಯ ವೆಬ್ ಸೈಟ್‌ಗಳನ್ನು ಆಯ್ಕೆ ಮಾಡಿದಲ್ಲಿ ನೀವು ನೀಡಲಾಗುವ ಮಾಹಿತಿಯ ನಿಖರತೆ, ಸುರಕ್ಷತೆ ಹಾಗೂ ಸಮಗ್ರತೆಯ ಬಗ್ಗೆ ನಾವು ಯಾವುದೇ ನಿಯಂತ್ರಣ ಹೊಂದಿರುವುದಿಲ್ಲ ಅಥವಾ ಭರವಸೆ ನೀಡುವುದಿಲ್ಲ ಎಂದು ನಾವು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. ಆದ್ದರಿಂದ ಈ ವೆಬ್ ಸೈಟ್ ಗಳಲ್ಲಿ ನಿಮ್ಮ ಕುರಿತು ಯಾವುದೇ ಮಾಹಿತಿ ನೀಡುವ ಮೊದಲು ಅವುಗಳ ಗೌಪ್ಯತಾ ನಿಯಮಗಳನ್ನು ಎಚ್ಚರಿಕೆಯಿಂದ ಓದಬೇಕೆಂದು ನಾವು ಸಲಹೆ ನೀಡುತ್ತೇವೆ.

ಸುರಕ್ಷತಾ ಮುನ್ನೆಚ್ಚರಿಕೆಗಳು:

ನೀವು ನಮ್ಮೊಂದಿಗೆ ವಿನಿಮಯ ಮಾಡಿರುವ ಮಾಹಿತಿಯ ನಷ್ಟವಾಗದಂತೆ, ದುರ್ಬಳಕೆಯಾಗದಂತೆ ಅಥವಾ ಮಾರ್ಪಾಡಾಗದಂತೆ ತಡೆಯುವ ಭರವಸೆ ನೀಡಲು ನಾವು ಕಠಿಣವಾದ, ದೃಢವಾದ ಭದ್ರತಾ ಮಾನದಂಡಗಳನ್ನು ತೆಗೆದುಕೊಳ್ಳುತ್ತೇವೆ. ನಾವು ನಿಮ್ಮ ಮಾಹಿತಿಯನ್ನು ರಕ್ಷಿಸಲು ಮತ್ತು ಅದನ್ನು ಯಾವುದೇ ಅನಧಿಕೃತ ಬಳಕೆಯಾಗದಂತೆ ತಡೆಯಲು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳುತ್ತೇವೆ. ನಿಮ್ಮ ಮಾಹಿತಿಯ ಕಾನೂನೂಬಾಹಿರ ಬಳಕೆಯಾಗದಂತೆ ಅಥವಾ ಅದನ್ನು ಮಾರ್ಪಡಿಸದಂತೆ ಅಥವಾ ಕಳ್ಳತನವಾಗದಂತೆ ತಡೆಯಲು ಅವುಗಳ ಸುರಕ್ಷತಗಾಗಿ ವೆರಿಸೈನ್ ಮತ್ತು ಇತರ ಸುರಕ್ಷಾ ಮಾನದಂಡಗಳಿಂದ ನೀಡಲಾದ SSL ಪ್ರಮಾಣಪತ್ರವನ್ನು ಹೊಂದಿದ್ದೇವೆ. ನಿಮಗೆ ಅಂತರ್ಜಾಲ ತಂತ್ರಜ್ಞಾನ 100% ಸುರಕ್ಷಿತವಲ್ಲವೆಂದು ನಾವು ಸಲಹೆ ನೀಡುತ್ತೇವೆ ಮತ್ತು ಅದನ್ನು ಬಳಸುವಾಗ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳಬೇಕೆಂದು ಸೂಚಿಸುತ್ತೇವೆ.

ಈ ಪಾಲಿಸಿಯಲ್ಲಿ ಅಥವಾ ಇದರ ಯಾವುದೇ ಭಾಗದಲ್ಲಿ ನೀಡಲಾಗಿರುವ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ, ನಿಮ್ಮ ವೈಯಕ್ತಿಕ ಮಾಹಿತಿಯ ಯಾವುದೇ ವಿಧದ ನಷ್ಟ, ಹಾನಿ ಅಥವಾ ದುರ್ಬಳಕೆಗೆ, ನಾವು ಹೊಣೆಯಾಗಿರುವುದಿಲ್ಲ, ಇಂತಹ ನಷ್ಟ, ಹಾನಿ ಅಥವಾ ದುರ್ಬಳಕೆಯಾದಲ್ಲಿ ಅದನ್ನು ಅನಿರೀಕ್ಷಿತ ಘಟನೆ (ಕೆಳಗೆ ವಿವರಿಸಿರುವಂತೆ) ಎಂದು ನಿರ್ಧರಿಸಲಾಗುತ್ತದೆ.

"ಅನಿರೀಕ್ಷಿತ ಘಟನೆ" ಎಂದರೆ ಮೆಡಿ ಅಸಿಸ್ಟ್ ನ ಸಕಾರಣ ನಿಯಂತ್ರಣವನ್ನು ಮೀರಿದ ಹಾಗೂ ಯಾವುದೇ ಪರಿಮಿತಿ ಇಲ್ಲದ, ಆಸ್ತಿನಾಶ, ಅಗ್ನಿ, ಪ್ರವಾಹ, ಸ್ಫೋಟ, ದೇವರ ಕ್ರಮ ನಾಗರಿಕ ದಂಗೆ, ಪ್ರತಿಭಟನೆ ಅಥವಾ ಯಾವುದೇ ವಿಧದ ಔದ್ಯೋಗಿಕ ಕ್ರಮ, ಗಲಾಟೆಗಳು, ದೊಂಬಿ, ಯುದ್ಧ, ಸರ್ಕಾರದ ಕ್ರಮ, ಕಂಪ್ಯೂಟರ್ ಮಾಹಿತಿ ಮತ್ತು ಸಂಗ್ರಹ ಸಾಧನಗಳಿಗೆ ಅನಧಿಕೃತ ಪ್ರವೇಶ, ಕಂಪ್ಯೂಟರ್ ಹಾನಿಗೊಳಗಾಗುವುದು, ಭದ್ರತೆಯ ಉಲ್ಲಂಘನೆ ಮತ್ತು ನಾಶಪಡಿಸುವಿಕೆ ಇತ್ಯಾದಿಗಳನ್ನು ಒಳಗೊಂಡ ಘಟನೆಗಳಾಗಿವೆ.

ಸಮ್ಮತಿ:

ನಮ್ಮ ವೆಬ್ ಸೈಟ್ ಬಳಸುವ ಮತ್ತು ನಿಮ್ಮ ಮಾಹಿತಿಯನ್ನು ನೀಡುವ ಮೂಲಕ ನೀವು ನಿಮ್ಮ ಮಾಹಿತಿಯನ್ನು ಈ ಗೌಪ್ಯತಾ ನಿಯಮದ ನಿಬಂಧನೆಗಳಿಗೆ ಅನುಗುಣವಾಗಿ ನಮ್ಮೊಂದಿಗೆ ಸಂಗ್ರಹಕ್ಕಾಗಿ ಮತ್ತು ಬಳಕೆಗಾಗಿ ಸಮ್ಮತಿ ನೀಡಿದಂತಾಗುತ್ತದೆ. ಈ ಗೌಪ್ಯತಾ ನಿಯಮಗಳಲ್ಲಿ ನಾವು ಮಾಡಲಾಗುವ ಯಾವುದೇ ಬದಲಾವಣೆಗಾಗಿ ದಯವಿಟ್ಟು ಈ ವಿಭಾಗವನ್ನು ಆಗಾಗ್ಗೆ ಪರಿಶೀಲಿಸಿ.

ದೂರು ಅಧಿಕಾರಿ:

ದೂರು ಅಧಿಕಾರಿಯ ಹೆಸರು ಮತ್ತು ಸಂಪರ್ಕ ವಿವರಗಳನ್ನು ಈ ಕೆಳಗೆ ನೀಡಲಾಗಿದ್ದು ನಿಮ್ಮೆಲ್ಲಾ ಸಂದೇಹ ಮತ್ತು ದೂರುಗಳನ್ನು 2000 ದ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಅನುಗುಣವಾಗಿ ಮತ್ತು ಅದರಲ್ಲಿರುವ ನಿಯಮಗಳಿಗೆ ಅನುಗುಣವಾಗಿ ದಾಖಲಿಸಬಹುದಾಗಿದೆ.

ದೂರು ಅಧಿಕಾರಿ:

ಇಮೇಲ್ ಐಡಿ: grievance.officer@mediassistindia.com
ಸಂಪರ್ಕ ಸಂಖ್ಯೆ: +91 80 4969 8000

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈವೇಟ್ ಲಿಮಿಟೆಡ್, ಟವರ್ ಡಿ, 4 ನೇ ಮಹಡಿ, ಐಬಿಸಿ ನಾಲೆಡ್ಜ್ ಪಾರ್ಕ್, 4/1, ಬನ್ನೇರುಘಟ್ಟ ರಸ್ತೆ, ಬೆಂಗಳೂರು 560029

ನಿಯಮ ಮತ್ತು ಕಾನೂನುಗಳಿಗೆ ಸಂಬಂಧಿಸಿದಂತೆ:

ನೀವು ವೆಬ್ ಸೈಟ್ ಗೆ ಭೇಟಿ ನೀಡಲು ಬಯಸಿದರೆ, ನಿಮ್ಮ ಭೇಟಿ ಮತ್ತು ಗೌಪ್ಯತೆಯ ಯಾವುದೇ ಸಂಘರ್ಷಗಳು ಈ ನಿಯಮ ಮತ್ತು ವೆಬ್ ಸೈಟ್ ನ ಬಳಕೆಯ ನಿಯಮಗಳಿಗೆ ಒಳಪಟ್ಟಿರುತ್ತದೆ. ಇವುಗಳೊಂದಿಗೆ, ಈ ಪಾಲಿಸಿಯ ಅಡಿಯಲ್ಲಿನ ಯಾವುದೇ ಸಂಘರ್ಷಗಳು ಭಾರತದ ಕಾನೂನಿನ ಅಧೀನಕ್ಕೆ ಒಳಪಟ್ಟಿರುತ್ತದೆ.